Bhajan
ಭಾಗ್ಯದ ಲಕ್ಷ್ಮೀ ಬಾರಮ್ಮ।
Bhagyada Lakshmi Baramma (Kannada)
ಭಾಗ್ಯದ ಲಕ್ಷ್ಮೀ ಬಾರಮ್ಮ। ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ॥
ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ। ಗೆಜ್ಜೆ ಕಾಲ್ಗಳ ಧ್ವನಿಯ ತೋರುತ। ಸಜ್ಜನ ಸಾಧು ಪೂಜೆಯ ವೇಳೆಗೆ। ಮಜ್ಜಿಗೆಯೊಳಗಿನ ಬೆಣ್ಣೆಯಂತೆ॥
ಕನಕ ವೃಷ್ಟಿಯ ಕರೆಯುತ ಬಾರೆ। ಮನಕಾಮನೆಯ ಸಿದ್ಧಿಯ ತೋರೆ। ದಿನಕರ ಕೋಟಿ ತೇಜದಿ ಹೊಳೆಯುವ। ಜನಕರಾಯನ ಕುಮಾರಿ ಬೇಗ॥
ಅತ್ತಿತ್ತಲಗಲದೆ ಭಕ್ತರ ಮನೆಯಲಿ। ನಿತ್ಯ ಮಹೋತ್ಸವ ನಿತ್ಯ ಸುಮಂಗಲ। ಸತ್ಯವ ತೋರುವ ಸಾಧು ಸಜ್ಜನರ। ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ॥
ಸಂಖ್ಯೆ ಇಲ್ಲದ ಭಾಗ್ಯವ ಕೊಟ್ಟು। ಕಂಕಣ ಕೈಯ ತಿರುವುತ ಬಾರೆ। ಕುಂಕುಮಾಂಕಿತೆ ಪಂಕಜಲೋಚನೆ। ವೆಂಕಟರಮಣನ ಬಿಂಕದ ರಾಣಿ॥
ಸಕ್ಕರೆ ತುಪ್ಪದ ಕಾಲುವೆ ಹರಿಸಿ। ಶುಕ್ರವಾರದ ಪೂಜೆಯ ವೇಳೆಗೆ। ಅಕ್ಕರೆಯುಳ್ಳ ಅಳಗಿರಿ ರಂಗನ। ಚೊಕ್ಕ ಪುರಂದರ ವಿಠಲನ ರಾಣಿ॥
Sourced · awaiting volunteer check
Help the community: compare this with a printed edition or official source and confirm it, or suggest a fix.
Recited on
More for Lakshmi